Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜಟಾಯು` ಸೆನ್ಸಾರ್ಗೆ ಸಿದ್ದ
Posted date: 01 Fri, Feb 2013 ? 09:52:05 AM

ದ್ವಿಭಾಷೆ - ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿರುವ ‘ಜಟಾಯು’ ...ದಿ ರೆಬೆಲ್ ವಿತಿನ್ ಮೊದಲ ಪ್ರತಿಯನ್ನು ಸಿದ್ದಮಾಡಿಕೊಂಡು ಸೆನ್ಸಾರ್ ಬಳಿ ಸದ್ಯದಲ್ಲೇ ತೆರಳಲಿದೆ.  ನಿರ್ಮಾಪಕ ಪ್ರಭಾಕರ್ ಅವರ ಪ್ರಕಾರ ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಿನೆಮವನ್ನು ಬಿಡುಗಡೆ ಮಾಡಬೇಕು ಎನ್ನುವುದು.

ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದ ನಂತರವೇ ತೆಲುಗು ಭಾಷೆಯಲ್ಲಿ ಬಿಡುಗಡೆ ಎಂದು ನಿರ್ಮಾಪಕರು ತಿಳಿಸುತ್ತಾರೆ. ಮೊದಲ ಚಿತ್ರ ‘ಸಂಚಾರಿ’ ಅಲ್ಲಿ ಕೇವಲ ನಟನೆ ಅಷ್ಟೇ ಮಾಡಿದ್ದ ರಾಜ್ ಎರಡನೆಯ ಚಿತ್ರದಲ್ಲಿ ನಟನೆ ಅಲ್ಲದೆ ನಿರ್ದೇಶಕನಾಗಿ ಬಡ್ತಿ ಪಡೆದು ‘ಜಟಾಯು’ ಚಿತ್ರ ಸಂಪೂರ್ಣ ಯಶಸ್ಸು ಕೊಡುವುದೆಂದು ನಂಬಿದ್ದಾರೆ. ನಿರ್ದೇಶಕರು ಪಕ್ಕಾ ವ್ಯಾಪಾರಿ ಸಿನೆಮಾದ ಜೊತೆ ಹೃದಯಂಗಮ ಸನ್ನಿವೇಶಗಳನ್ನು ಪೇರಿಸಿದ್ದಾರೆ.

ಈ ಚಿತ್ರ ಎಲ್ಲಿ ಪ್ರಾರಂಭ ಆಗುವುದೊ ಅದೇ ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ ಅದು ತೆರೆಯ ಮೇಲೆ ಹಾಗೆಯೇ ಮೂಡಿಬರಲಿದೆ.

ಐದು ಸಾಹಸ ಸನ್ನಿವೇಶಗಳು  ಹಾಗೂ ಐದು ಸಾಹಸ ಒಳಗೊಂಡಿರುವ ‘ಜಟಾಯು’?. ದಿ ರೆಬೆಲ್ ವಿತಿನ್  ‘ಅಮೋಘ ಎಂಟೆರ್ಪೃಸೆಸ್’ ಚಿತ್ರ. ಬಿ. ಸುರೇಶ್ ಅವರ ಸಂಭಾಷಣೆ, ವಿನಯ್ ಚಂದ್ರ ಅವರ ಸಂಗೀತ, ಎಂ ಯು ನಂದಕುಮಾರ್ ಅವರ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಅವರ ಸಂಕಲನ, ಹರ್ಷ, ಕಲೈ, ಮುರಳಿ, ರಾಮು ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಅವರ ಸಾಹಸ ‘ಜಟಾಯು’ ಚಿತ್ರಕ್ಕೆ ಇದೆ.

ನಾಯಕ ರಾಜ್ ಅವರಿಗೆ ಸುರಭಿ ಮತ್ತು ರೂಪಶ್ರೀ ನಾಯಕಿಯರು. ಅವಿನಾಷ್, ನಟರಾಜ್, ಬುಲ್ಲೆಟ್ ಪ್ರಕಾಷ್, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಸಿದ್ದರಾಜ್ ಕಲ್ಯಂಕರ್, ಕುರುಪ್ ರಮೇಶ್ ಇನ್ನಿತರರು ತಾರಾಗ
ಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜಟಾಯು` ಸೆನ್ಸಾರ್ಗೆ ಸಿದ್ದ - Chitratara.com
Copyright 2009 chitratara.com Reproduction is forbidden unless authorized. All rights reserved.